ಕಲಿಕೆಯ ಮಾತಿನ ಮಾಲೆಯ ನೀಲೆ ಸೀಲೆಗೆ
ನಿಲುಕದು ಸಂಗನ ಶರಣಸ್ಥಲ.
ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ?
ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ?
ಕೊಲೆ ಆತ್ಮದಲಿ ಕೊನೆನಾಲಿಗೆಯ ಮೃದು ಕ್ರೋಧ.....
ಫಲ ನಿಃಫಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music Courtesy:
Video
TransliterationKalikeya mātina māleya nīle sīlege
nilukadu saṅgana śaraṇasthala.
Balātkārake baḍidu hālaneredare bālatvavahude?
Yalavada marada ele hū sundara phalapadavahude?
Kole ātmadali konenāligeya mr̥du krōdha.....
Phala niḥphala kāṇā
ele nam'ma kūḍalacennasaṅgamadēvayya.