Index   ವಚನ - 37    Search  
 
ಮೂರರೊಳಗೆ ಮುಣುಗಿ ಮುಖಭಂಗವಾದರು ಮುನ್ನಿನ ಹಿರಿಯರು. ವೀರ ಧೀರ ಪುರುಷರೆಲ್ಲರು ವಿವೇಕಗೆಟ್ಟರು ಹಿಡಿಯದ ಕಾರಣದಿಂದ. ದಾರಿತಪ್ಪಿ ಅಡವಿಯಕೂಡಿ ಮೂರರ ಮೇರೆಯ ಕಾರಣದ ವಾರಕ ಮೂರನು ತನ್ನದುಯೆಂದ ಕಾರಣದಿಂದ ಜಾರೆಯರಾದರು ಹೋರಿ ಹೋರಿ ಗತಭ್ರಷ್ಟರಾದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.