Index   ವಚನ - 47    Search  
 
ನಿತ್ಯ ವೈರಾಗ್ಯದಿಂದ ದೊರೆಕೊಂಬುದು ಭಕ್ತಿಸ್ಥಲ. ತತ್ವ ವೈರಾಗ್ಯದಿಂದ ದೊರೆಕೊಂಬುದು ಐಕ್ಯಸ್ಥಲ. ಚಿತ್ತವೃತ್ತಿಯಲಿ ತಿಳಿದು ಕಾಬುದು ಚಿತ್ಪ್ರಕಾಶವ ರತ್ನಪರೀಕ್ಷೆಯ ರಾಜಾಧಿರಾಜ ಬಲ್ಲನಲ್ಲದೆ ರಾಕ್ಷಸರೆತ್ತ ಬಲ್ಲರಯ್ಯ? ಕೃತಯುಗದಿಂದತ್ತತ್ತ ಜ್ಞಾನ, ಇತ್ತಿತ್ತ ಅಜ್ಞಾನ ನಿತ್ಯಜ್ಞಾನ ಅವಿರಳ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.