ಶಾಸ್ತ್ರ ವೈರಾಗ್ಯ, ಪ್ರಸೂತಿ ವೈರಾಗ್ಯ,
ಸ್ಮಶಾನ ವೈರಾಗ್ಯ-ಯಾತನ ಶರೀರಕೆ
ಇವು ವ್ಯಾಪಾರಂಗಳು.
ನೂತನ ಕಲಿಕೆಯ ಮಾತು ನುಡಿ ವೈರಾಗ್ಯವು.
ಸೂತಕ ಹೋದ ಮೂರು ದಿನಕ್ಕೆ ಸುರತಾನಂದವು.
ತತ್ಕಾಲದ ಶವಕ್ಕೇಪರಿ ದುಃಖಂಗಳು.
ಆ ತತ್ಕಾಲಕ್ಕೆ ವೈರಾಗ್ಯ ಕ್ಷಣದೊಳು ಯೋಗ್ಯವು
ನೀತಿ-ಭಕ್ತಿ-ವೈರಾಗ್ಯ ಸ್ವರೂಪು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.