Index   ವಚನ - 49    Search  
 
ನಾನೆಂಬ ಬ್ರಹ್ಮನ ನುಂಗಿದಳು ಮಾಯೆ. ನಾನೆಂಬ ವಿಷ್ಣುವ ನುಂಗಿದಳು ಮಾಯೆ. ನಾನೆಂಬ ರುದ್ರನ ನುಂಗಿದಳು ಮಾಯೆ. ಅಜ್ಞಾನ ತ್ರಿವಿಧವ ನುಂಗಿ ನಯನದೊಳು ಬೊಂಬೆಯಾದಳು ಮಾಯೆ. ನಾನೆಂಬ ಮಾಯವನು ನುಂಗಿ ಗೊಹೇಶ್ವರ ಅಭ್ರಛಾಯವಾದನು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.