Index   ವಚನ - 65    Search  
 
ಅಂಕಿತನಾಮದಿಂದ ಶಂಕರ ತಾಳ್ದ ಸಜೀವಿ ನಿರ್ಜೀವಿ. ಪಂಕಜಕಮಲದಲಿ ಆತ್ಮ ಭಸಿತ ಆಪಾದ ಮಸ್ತಕ ವಿಭೂತಿ ಭಸ್ಮಾಂಗ ಕಂಕಣ ಸ್ಥಾನ ಸ್ಥಾನದಲಿ ಕರಪಾತ್ರೆ ಶಿರಮಾಲೆ ಅಂಕದ ಕಣದೊಳು ಮೆಟ್ಟಿ ತುಳಿವರ ಬಿಟ್ಟಾಡಿ ಪಾದರಕ್ಷೆ ಲೆಂಕರ ಲೆಂಕನೆಂಬ ಕರುಣಾರ್ಥ ಶಂಕರನ ಸದ್ಭಕ್ತರಿಗೆ ಸಲುವುದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.