ಸಾಸಿರನಾಮ ಭಕ್ತಂಗೆ ಸಲುವುದಲ್ಲದೆ
ವಸ್ತುವಿಂಗೆ ಸಲ್ಲದು.
ಭಕ್ತಂಗೆ ನಾಮ, ವಸ್ತು ನಾಮವಿರಹಿತ
ದಾಸೋಹವ ಕೊಂಬಾತ ಅಂತರಂಗಿ
ನಿರಂಗಿ ನಿಶ್ಶಬ್ದ ಬ್ರಹ್ಮ.
ದೇಶಾಂತ್ರ ಚರಿಸುವ ಉಚ್ಚರಿಸುವ
ನಿಶ್ಚಿಂತ ನಿರಾಳವಾಸಕ್ಕೆ ನಾಮವಿಟ್ಟು ಕರವರೆ?
ಪುತ್ರ ಮಿತ್ರ ಕಳತ್ರಯಂಗಳ ದೋಷ ದ್ರೋಹಂಗಳು
ಬೈವೊಡೆ ಹೊಯುವೊಡೆ ಈಶ್ವರ ಜನಿತಕ್ಕೆ ಬಹನೆ?
ಎಷ್ಟು ಲಕ್ಷೋಪಲಕ್ಷ ವೃಕ್ಷ ಬೀಜದಿಂದ?
ಆ ಬೀಜ ವೃಕ್ಷದಿಂದ ಸಹ
ಸ್ವನಾಮವ ಸದ್ಭಕ್ತಂಗೆ ಹೆಸರಿಟ್ಟು
ಲಿಂಗಾಂಗ ಸಂಗವಾದ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Sāsiranāma bhaktaṅge saluvudallade
vastuviṅge salladu.
Bhaktaṅge nāma, vastu nāmavirahita
dāsōhava kombāta antaraṅgi
niraṅgi niśśabda brahma.
Dēśāntra carisuva uccarisuva
niścinta nirāḷavāsakke nāmaviṭṭu karavare?
Putra mitra kaḷatrayaṅgaḷa dōṣa drōhaṅgaḷu
baivoḍe hoyuvoḍe īśvara janitakke bahane?
Eṣṭu lakṣōpalakṣa vr̥kṣa bījadinda?
Ā bīja vr̥kṣadinda saha
svanāmava sadbhaktaṅge hesariṭṭu
liṅgāṅga saṅgavāda kāṇā
ele nam'ma kūḍalacennasaṅgamadēvayya.