Index   ವಚನ - 66    Search  
 
ಭಕ್ತರೆಂಬರು ಉತ್ತಮ ಜಲ್ಮವ ಕಾಣರು; ಸತ್ತು ಸತ್ತು ಹುಟ್ಟುವರು ಪರಮ ಪುರುಷಾರ್ಥಕ್ಕೆ. ನಿತ್ಯ ದುಃಖಿಗಳು ಸುಖವ ನೋಡುವರು ಸುರತಾನಂದಕ್ಕೆ ದಾಕ್ಷಿಣ್ಯ ಸರ್ವಜೀವದಯಾಳ್ದರು ರಾಜೀವ ಮಾನ್ಯರು ಭುಕ್ತಿ ಮುಕ್ತಿ ಫಲದಾಯಕರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.