Index   ವಚನ - 67    Search  
 
ವಚನವಂ ಕಲಿತು ರಚಿಸುವ ರುಚಿಕರವೆಂತು ಕುಶಲರಿಗೆ? ಕುರೂಪು ರೂಪಹುದೆ? ಅಚಲಭಕ್ತಿ ಅಳವಟ್ಟಿತೇಯವರಿಂಗೆ? ನೀಚಸ್ಥಲದವರು ಕೋಟಿ ವಚನವ ಕಲಿತರೇನು? ವಚನದಂತೆ ಇಹರೆ? ಅಚಿತ ಅಚಿತ ಆನಂದ ಆಗಮದಂತೆ ವಚನ ವಚನದಂತೆ ತಾ ತನ್ನಂತೆ ವಚನದ ಶ್ರುತಿ. ಅಜಾತರಿಗಲ್ಲದೆ ಅಳವಡದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.