Index   ವಚನ - 81    Search  
 
ಹಿಂದು ಮುಂದುಯೆಂಬರು ಒಂದೆ ಗರ್ಭದೊಳುಪುಟ್ಟಿ ಹಿಂದಾದ ಕ್ರಿಯೆ ಮುಂದಾದ ನಿಃಕ್ರಿಯೆ ಬಂಧನವೆರಡು ಜಾತಕ. ಬಲ್ಲಿದರಿಗೆ ಬಲ್ಲಿದರು ಆಗಿ ಹಿಂದರಿದು ಮುಂದರಿದು ಒಂದು ಮಾಡಿ ನಡಸೆಂಬ ಅನುಜ್ಞೆಯಿಂದ ಬಂದರು ತಂದವರ ಕೂನ ತಂದ[ವರು] ಬಲ್ಲರಲ್ಲದೆ ಮುಂದೆ ಯಾರು ಅರಿಯರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.