Index   ವಚನ - 83    Search  
 
ನಿರಾಕಾರದೊಳು ನೀರಬೀಜವಮಾಡಿ ಆರಿಸಿ ಘಟ್ಟಿಗೊಳಿಸಿ ಅರುಹಿದೆ ಸಕಲಕ್ಕೆ. ಈ ನಾರ. ಗನರ ತಂತ್ರಕ್ಕೆ ಇಟ್ಟಿದಲ್ಲಿ ಮೀರಿದ ಸ್ವಯವು. ನೀರು ತುಂಬಿಳಿದು ಸಾರಾಯ ಕೊಪ್ಪರಿಕೆ ಬೆಲ್ಲಬಂದಂತೆ. ನೀರು ಬಂದು ನಿರುತದಲ್ಲಿ ಕಡಿಗಟ್ಟುವಡೆ ಮರಣವಾದಂತೆ, ಯಾರ ಕೂಡಬೇಕಾಯಿತು ಅವರ ಕೂಡಿತು. ನಾರಿವಾಣ ಗುರು, ನೀರು ಬೆಲ್ಲ ಶಿಷ್ಯ. ಸೇರಿದರೆ ಅಂತು ಆಪುದನು ಸೇರಿ ಸೈ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.