Index   ವಚನ - 85    Search  
 
ನುಡಿದಂತೆ ನಡೆವವರ, ನಡೆದಂತೆ ನುಡಿವವರ ನಡೆಯ ನಿಮ್ಮ ಭಕ್ತರ ಎನಗೊಮ್ಮೆ ತೋರಿಸಯ್ಯ. ಅದರಡಿಗೆ ಮಡಿಯ ಹಾಸುವೆನು; ಅವರ ಲೆಂಕರ ಲೆಂಕನಾಗಿ ಉಗಿವ ಪಡುಗವ ಹಿಡಿವೆ. ಉಗುಳ್ದ ತಂಬುಲಕೆ ಕೊಡವಿಡಿದು ನಡವೆ ಬೆಸ್ತರ ಬೋವನಾಗಿ. ದೃಢವುಳ್ಳ ಭಕ್ತರ ಬಾಗಿಲ ಕಾಯ್ವ ನರನಾಗಿ ಎಡದೆರವಿಲ್ಲದೆ ಅವರಿಪ್ಪಂತೆ ಇಪ್ಪೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.