Index   ವಚನ - 86    Search  
 
ಖಂಡ ವಚನವ ಕಲಿತರೇನಯ್ಯ? ಕಂಡುದ ಬಿಡ, ಕೊಂಡುದ ಕೊಡ. ಉಂಡಮನೆಗೆರಡ ಬಗೆವುದು ಬಂಡರಮತ. ಹಂಡಿಗನ ವಗತನದಂತೆ ಹೋಯಿತ್ತು [ಹೋ]ಯಿತ್ತೆಂಬರು. ಚಾಂಡಾಲರು ನುಡಿವರು ನಡೆಯರು ಕಂಡದ್ದಾಡಿ ಖಂಡಿಸಿಕೊಂಬರು ಕರ್ಮಧರ್ಮವ. ದಿಂಡೆಯರ ಸಂಗವ ಮಾಡುವುದು ದಿಕ್ಕುಗೇಡು ಬಂಡು ಆಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.