Index   ವಚನ - 87    Search  
 
ಖಂಡಿತವಂ ನುಡಿವುದು, ಕರ್ಮ ಧರ್ಮವ ಕಂಡು ನಡವುದು. ಮಂಡೆ ಮಾಸಿದರೆ ಮಿಂದಂತೆ ಮನದ ಮಲಿನ ಬಿಡುವುದು. ಕಂಡರೆ ಕಣ್ಣ ಮುಚ್ಚುವುದು ಪರಧನ ಪರಸ್ತ್ರೀ ಪರನಿಂದ್ಯ. ಉಂಡು ಉಣ್ಣದೆ, ಬಳಸಿ ಬಳಸದೆ, ಬೈದು ಬಯ್ಯದೆ ಕೆಂಡದಪರಿ ಆರಿದರೆ ಆರಿದಂತೆ, ಉರಿದರೆ ಉರಿದಂತೆ ಬೆಂಡಗುಂಡಿಗೆ ಕಟ್ಟಿದಂತೆ ಇರಬೇಕು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.