ಮಾಂಸಪಿಂಡ ಮಂತ್ರಪಿಂಡವೆಂಬುದಕ ಕುರುಹ್ಯಾವುದು?
ಹೊಲೆ ಮೊದಲೆಂಬುದೆ ಮಂತ್ರಪಿಂಡ;
ಕೂಟ ಮೊದಲೆಂಬುದೆ ಮಾಂಸಪಿಂಡ;
ಹೊಲಿದ ಪಾದರಕ್ಷೆ ಆಪಾದಮಸ್ತಕದಿಂ ಹುದುಗು
ಎಲುವಿನ ಮೂಳೆ ಮಾಂಸದ ಮಾಟ ರಕ್ತದ ಕೊಣ
ನರದ ಹಂಜರ ನಾನಾ ವಿಧದ ಕ್ರಿಮಿಕೀಟ
ಕುಲಮೊದಲ್ಯಾವುದು ಕಡೆಯಾವುದು?
ವರ್ಣಾಶ್ರಮಕ್ಕೆ ಫಲವದರಿಂದ ನಿಃಫಲವಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Mānsapiṇḍa mantrapiṇḍavembudaka kuruhyāvudu?
Hole modalembude mantrapiṇḍa;
kūṭa modalembude mānsapiṇḍa;
holida pādarakṣe āpādamastakadiṁ hudugu
eluvina mūḷe mānsada māṭa raktada koṇa
narada han̄jara nānā vidhada krimikīṭa
kulamodalyāvudu kaḍeyāvudu?
Varṇāśramakke phalavadarinda niḥphalavāyitu kāṇā
ele nam'ma kūḍalacennasaṅgamadēvayya.