ರೂಪು ಸಂಪನ್ನನಾದಡೇನಯ್ಯ ಸ್ತ್ರೀಯರಿಗೆ ಭಾಜನವಾಯಿತ್ತು.
ಗುಣ ಸಂಪನ್ನನಾದಡೇನಯ್ಯ ಭಾಜನವಾಯಿತ್ತು.
ದ್ರವ್ಯ ಸಂಪನ್ನನಾದಡೇನಯ್ಯ ರಾಜರಿಗೆ ಭಾಜನವಾಯಿತ್ತು.
ಖಡ್ಗ ಸಂಪನ್ನನಾದಡೇನಯ್ಯ ರಣಾಗ್ರಕ್ಕೆ ಭಾಜನವಾಯಿತ್ತು.
ತ್ಯಾಗ ಸಂಪನ್ನನಾದಡೇನಯ್ಯ ಯಾಚಕರಿಗೆ ಭಾಜನವಾಯಿತ್ತು.
ಬಸವಣ್ಣ ನಿಮ್ಮ ಭಕ್ತಿ ಸಂಪನ್ನನಾದ ಕಾರಣದಿಂದ
ಸ್ವಯಲಿಂಗಿಯಾದೆನು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.