Index   ವಚನ - 100    Search  
 
ಸೂತಕವೆಂದಲ್ಲಿ ಪಾತಕ ಹೊದ್ದುವುದೇನಯ್ಯ? ಮಾತೆಯ ಗರ್ಭದೊಳು ಮಾಂಸ ಹೊಲೆ, ಅಸ್ಥಿ ಮಾಂಸ ಹೊಲೆ, ಮಜ್ಜೆ ಮಾಂಸ ಹೊಲೆ, ನರಮಾಂಸ ಹೊಲೆ, ರಕ್ತಮಾಂಸ ಹೊಲೆ, ಚರ್ಮಮಾಂಸ ಹೊಲೆ, ರೋಮ ಈ ತನು ಮಾಂಸ ಹೊಲೆ, ತ್ರಿಮಾಂಸ ಹೊಲೆ, ರೂಪು ಲಾವಣ್ಯ ಸೂಸಕದ ಮುದ್ದೆ ಪಾತಕದ ಗಟ್ಟಿ ಇದಕೆ ಯಾತರ ಕುಲವೊ? ರಾತ್ರಿ ಒಂದು, ದಿನ ಒಂದು, ಹೆಣ್ಣೊಂದು ಗಂಡೊಂದು, ಬಾಹತ್ರ ಕೂಡಿ ಬಲ್ಲೆ ಬಲ್ಲೆನೆಂದು ಹೋರಿ ಕೆಡುವುದು ಮಾತನಾಡಲಿಕೆ ತೆರಪಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.