Index   ವಚನ - 99    Search  
 
ಮಾಂಸಪಿಂಡ ಮಂತ್ರಪಿಂಡವೆಂಬುದಕ ಕುರುಹ್ಯಾವುದು? ಹೊಲೆ ಮೊದಲೆಂಬುದೆ ಮಂತ್ರಪಿಂಡ; ಕೂಟ ಮೊದಲೆಂಬುದೆ ಮಾಂಸಪಿಂಡ; ಹೊಲಿದ ಪಾದರಕ್ಷೆ ಆಪಾದಮಸ್ತಕದಿಂ ಹುದುಗು ಎಲುವಿನ ಮೂಳೆ ಮಾಂಸದ ಮಾಟ ರಕ್ತದ ಕೊಣ ನರದ ಹಂಜರ ನಾನಾ ವಿಧದ ಕ್ರಿಮಿಕೀಟ ಕುಲಮೊದಲ್ಯಾವುದು ಕಡೆಯಾವುದು? ವರ್ಣಾಶ್ರಮಕ್ಕೆ ಫಲವದರಿಂದ ನಿಃಫಲವಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.