Index   ವಚನ - 3    Search  
 
ತಾ ನಿಜವಿಟ್ಟ ಆ ನೆಲೆಯಲ್ಲಿ, ತನ್ನಯ ವಿಶ್ವಾಸದಿಂದ ದೇವತಾಕಲೆ ಕುರುಹುಗೊಂಡಿತ್ತು. ದೇವತಾಕಲೆ ತನ್ನ ತಾನಹಲ್ಲಿ ಇದಿರೆಡೆಯುಂಟೆ? ಸ್ಫಟಿಕದ ಘಟವರ್ತಿಯನೊಳಕೊಂಬುದಲ್ಲದೆ, ಸ್ವಯರತ್ನ ಬಹುವರ್ಣಕ್ಕೊಳಗಪ್ಪುದೆ? ಇಂತಿವ ತಿಳಿದ ಸ್ವಾನುಭಾವಾತ್ಮಕನು. ಲಕ್ಷಾಲಕ್ಷಂಗಳೆಂಬ ಭಿತ್ತಿಯ ಮೆಟ್ಟದೆ ನಿಶ್ಚಯವಾಗಿಹ ನಿಜಶರಣ ನೋಡಾ, ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.