`ಏತೇಷೂಕ್ತಿಷು ಸರ್ವೇಷೂ ತತ್ತನ್ಮಂತ್ರೇಷು ಮಿಶ್ರಕಾತ್||
ಸಮಭಕ್ತಿ ಸಮಾಯುಜ್ಯ ಸರ್ವಾನ್ ಲಿಂಗೇನ ಭಾವಯೇತ್' ಎಂದು ಈ ಹೇಳಿದ
ಪಂಚಾವರಣ ಮೊದಲಾದ ಸಮಸ್ತ ದೇವತೆಗಳಲ್ಲಿಯೂ ಆಯಾಯ
ದೇವತಾಮಂತ್ರಗಳಲ್ಲಿಯೂ ಬೆರಸಿಪ್ರ್ಪುದರಿಂದ ಸಮಾನವಾದ ಭಕ್ತಿಯೊಡನೆ
ಕೂಡಿ ಸಮಸ್ತ ದೇವತೆಗಳನು ಶಿವ ಪರಿಪೂರ್ಣಭಾವದಿಂ, ಶಿವಲಿಂಗದೊಡನೆ ಕೂಡಿ
ಭಾವಿಸೂದು. `ಮಿಶ್ರಶೈವಮಿತಿ ಪ್ರೋಕ್ತಂ ಶುದ್ಧಶೈವಮಥ ಶೃಣು'- ಈ
ಪ್ರಕಾರದಿಂದ ಮಿಶ್ರಶೈವವು ಹೇಳಲ್ಪಟ್ಟಿತ್ತು ಇದರಿಂದ ಮುಂದೆ
ಶುದ್ಧಶೈವವನು: ಕೇಳ ಎಲೆ ಕುಮಾರ ಎಂದು ಶಿವನು
ನಿರೂಪಿಸುತ್ತಿರ್ದ್ದನಯ್ಯಾ, ಶಾಂತವೀರೇಶ್ವರಾ.
Art
Manuscript
Music Courtesy:
Video
Transliteration`Ētēṣūktiṣu sarvēṣū tattanmantrēṣu miśrakāt||
samabhakti samāyujya sarvān liṅgēna bhāvayēt' endu ī hēḷida
pan̄cāvaraṇa modalāda samasta dēvategaḷalliyū āyāya
dēvatāmantragaḷalliyū berasiprpudarinda samānavāda bhaktiyoḍane
kūḍi samasta dēvategaḷanu śiva paripūrṇabhāvadiṁ, śivaliṅgadoḍane kūḍi
bhāvisūdu. `Miśraśaivamiti prōktaṁ śud'dhaśaivamatha śr̥ṇu'- ī
prakāradinda miśraśaivavu hēḷalpaṭṭittu idarinda munde
śud'dhaśaivavanu: Kēḷa ele kumāra endu śivanu
nirūpisuttirddanayyā, śāntavīrēśvarā.