`ಶುದ್ಧತ್ವಂ ಶಿವಮುದ್ಧಿಷ್ಟಂ ಶಿವಾಜ್ಜಾತಾದಿಶೈವಕಂ| ಶುದ್ಧಶೈವ
ಸಮಾಯೋಗಾತ್|| ಶುದ್ಧಶೈವಮಿತಿ ಸ್ಮೃತಂ' ಎಂದು ಶಿವನು
ಉದೇಶಿಸಲ್ಪಟ್ಟುದಹುದರಿಂದ ಶುದ್ಧತ್ವವಪ್ಪುದು. ಶಿವನ ದೆಸೆಯಿಂದ
ಪುಟ್ಟಿದುದಾದ ಕಾರಣ ಶೈವ ಶಬ್ದವಾಯಿತ್ತು. ಶುದ್ಧಶೈವಂಗಳೆಂಬ ಶಬ್ದಗಳ
ಕೂಟದ ದೆಸೆಯಿಂದ ಶುದ್ಧಶೈವವೆಂದು ನೆನೆಯಲ್ಪಟ್ಟಿತ್ತು. ಮತ್ತಂ
`ಶುದ್ಧಶೈವಾನ್ಮಹಾಸೇನ ತಸ್ಮಾಜ್ಜಾತಃ ಶಿವದ್ವಿಜಃ' ಎಂದು ಆ ಶುದ್ಧಶೈವನ
ದೆಸೆಯಿಂದ ಪುಟ್ಟಿದವನು ಶಿವಬ್ರಾಹ್ಮಣನೆನಿಸಿಕೊಂಬನು. `ವೀರತಂತ್ರೇ ಶಿವದ್ವಿಜಾಸ್ತು
ವಿಪ್ರೇಂದ್ರಕಾದ್ಯಾದಿ ಶೈವಾಃ ಪ್ರಕೀರ್ತಿತಾಃ' ಎಂದು ಶಿವಬ್ರಾಹ್ಮಣರೆನಿಸಿಕೊಂಬ ಆ
ಬ್ರಾಹ್ಮಣರುಗಳು ಆದಿಶೈವರೆನಿಸಿಕೊಂ
ಬರು. ಅವರಾರಾರೆಂದೊಡೆ ಪೇಳ್ದಪಂ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Śud'dhatvaṁ śivamud'dhiṣṭaṁ śivājjātādiśaivakaṁ| śud'dhaśaiva
samāyōgāt|| śud'dhaśaivamiti smr̥taṁ' endu śivanu
udēśisalpaṭṭudahudarinda śud'dhatvavappudu. Śivana deseyinda
puṭṭidudāda kāraṇa śaiva śabdavāyittu. Śud'dhaśaivaṅgaḷemba śabdagaḷa
kūṭada deseyinda śud'dhaśaivavendu neneyalpaṭṭittu. Mattaṁ
`śud'dhaśaivānmahāsēna tasmājjātaḥ śivadvijaḥ' endu ā śud'dhaśaivanaDeseyinda puṭṭidavanu śivabrāhmaṇanenisikombanu. `Vīratantrē śivadvijāstu
viprēndrakādyādi śaivāḥ prakīrtitāḥ' endu śivabrāhmaṇarenisikomba ā
brāhmaṇarugaḷu ādiśaivarenisikoṁ
baru. Avarārārendoḍe pēḷdapaṁ, śāntavīrēśvarā.