Index   ವಚನ - 26    Search  
 
`ಏತೇಷೂಕ್ತಿಷು ಸರ್ವೇಷೂ ತತ್ತನ್ಮಂತ್ರೇಷು ಮಿಶ್ರಕಾತ್|| ಸಮಭಕ್ತಿ ಸಮಾಯುಜ್ಯ ಸರ್ವಾನ್ ಲಿಂಗೇನ ಭಾವಯೇತ್' ಎಂದು ಈ ಹೇಳಿದ ಪಂಚಾವರಣ ಮೊದಲಾದ ಸಮಸ್ತ ದೇವತೆಗಳಲ್ಲಿಯೂ ಆಯಾಯ ದೇವತಾಮಂತ್ರಗಳಲ್ಲಿಯೂ ಬೆರಸಿಪ್ರ್ಪುದರಿಂದ ಸಮಾನವಾದ ಭಕ್ತಿಯೊಡನೆ ಕೂಡಿ ಸಮಸ್ತ ದೇವತೆಗಳನು ಶಿವ ಪರಿಪೂರ್ಣಭಾವದಿಂ, ಶಿವಲಿಂಗದೊಡನೆ ಕೂಡಿ ಭಾವಿಸೂದು. `ಮಿಶ್ರಶೈವಮಿತಿ ಪ್ರೋಕ್ತಂ ಶುದ್ಧಶೈವಮಥ ಶೃಣು'- ಈ ಪ್ರಕಾರದಿಂದ ಮಿಶ್ರಶೈವವು ಹೇಳಲ್ಪಟ್ಟಿತ್ತು ಇದರಿಂದ ಮುಂದೆ ಶುದ್ಧಶೈವವನು: ಕೇಳ ಎಲೆ ಕುಮಾರ ಎಂದು ಶಿವನು ನಿರೂಪಿಸುತ್ತಿರ್ದ್ದನಯ್ಯಾ, ಶಾಂತವೀರೇಶ್ವರಾ.