Index   ವಚನ - 34    Search  
 
`ಅನ್ಯೇಷಾಂ ಸ್ವಾರ್ಥಯಜನಂ ನ ಕುರ್ಯ್ಯಾತ್ತು ಪರಾರ್ತ್ಥಂಕಂ|| ಮೋಹ ಲೋಭಾಶ್ಚ ಕುರ್ವೀತರಾಜ್ಞಾ ರಾಷ್ಟ್ರಸ್ಯ ದುಃಸ್ಥಿತಿಃ' ಎಂದು ಶಿವಾವರಣಂಗಳಲ್ಲಿ ಅಲ್ಲದೆ ಪೈಥಕ್‍ಸ್ಥಾನಸ್ಥರಾದ ವಿಷ್ಮ್ವಾದ್ಯನ್ಯ ದೇವತೆಗಳ ಪೂಜೆಯನು ಶುದ್ಧ ಶೈವನು ಸ್ವಾರ್ಥವಾಗಿಯೂ ಪರಾರ್ಥವಾಗಿಯೂ ಮಾಡಲಾಗದು. ಮರವೆಯ ದೆಸೆಯಿಂದಲೂ ಸಂಸಾರ ಲೋಭದ ದೆಸೆಯಿಂದಲೂ ಮಾಡುವನಾದೊಡೆ ಆ ರಾಜ್ಯಕ್ಕೆಯೂ ಆ ರಾಜಂಗೆಯೂ ಕೇಡಪ್ಪುದು. ಈ ಅರ್ಥಮಂ ವ್ಯಕ್ತಮಂ ಮಾಡಿದಪಂ ಶಾಂತವೀರಪ್ರಭುವೇ.