Index   ವಚನ - 66    Search  
 
`ಇತಿ ವ್ರತಸಮಾಯುಕ್ತೋ ವೀರಶೈವೋ' ವಿಶಿಷ್ಟತೇ ಇತ್ಯಾದಿ ವ್ರತಂ ಗಳೊಡನೆ ಮಾಡಿದಾತನೆ ವೀರಶೈವವನೆಂದು ವಿಶೇಷಿಸಲ್ಪಡುತ್ತಿಹನಯ್ಯ. `ವಿಶೇಷ ಶೈವಮಾಖ್ಯಾತಂ ನಿರಾಭಾರಂ ತತಃ ಶ್ರುಣು' ಎಂದುದಾಗಿ, ಈ ಪ್ರಕಾರದಿಂ ವಿಶೇಷ ವೀರಶೈವವೆಂಬ ಭಕ್ತಸ್ಥಲವು ಹೇಳಲ್ಪಟ್ಟಿತ್ತು. ಆನಂತರದಲ್ಲಿ ನಿರಾಭಾರಿ ವೀರಶೈವವೆಂಬ ಜಂಗಮ ಸ್ಥಲಮಂ ಕೇಳೆಂದು ಈಶ್ವರನು ಷಣ್ಮುಖ ದೇವರಿಗೆ ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ.