`ಸರ್ವಸಂಸಾರಸೌಖ್ಯಾನಿತ್ಯತ್ತ್ವಾಚಿತ್ತಂ ಶಿವೇ ಲಯೇತ್| ದಂಡ ಕೌಪೀನ ಕಾಷಾಯಂ
ಜಟಾವಲ್ಕಲಧಾರಕ'|| ಎಂದುದಾಗಿ, ಆವನಾನೊಬ್ಬ ನಿರಾಭಾರಿ
ವೀರಶೈವನು ಸಮಸ್ತಸಂಸಾರಸುಖಂಗಳಂ ಬಿಟ್ಟು, ದಂಡ ಕೌಪೀನ ಕಾಷಾಂಬರ
ಜಟಾಬಂಧ ನಾರಸೀರೆಗಳಂ ಧರಿಸುತ್ತ, ಸಂಸಾರ ವ್ಯಾಪಾರ ನಿರ್ಮುಕ್ತವಾದ
ಚಿತ್ತಮಂ ಶಿವಲಿಂಗದಲ್ಲಿ ಲಯವನೆಯ್ದಿಸುವದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Sarvasansārasaukhyānityattvācittaṁ śivē layēt| daṇḍa kaupīna kāṣāyaṁ
jaṭāvalkaladhāraka'|| endudāgi, āvanānobba nirābhāri
vīraśaivanu samastasansārasukhaṅgaḷaṁ biṭṭu, daṇḍa kaupīna kāṣāmbara
jaṭābandha nārasīregaḷaṁ dharisutta, sansāra vyāpāra nirmuktavāda
cittamaṁ śivaliṅgadalli layavaneydisuvadayyā śāntavīrēśvarā.