Index   ವಚನ - 85    Search  
 
ಬಳಿಕಾ ವೀರಶೈವನೆ ಕ್ರಿಯಾಭೇದದಿಂ ಸಾಮಾನ್ಯವೀರಶೈವನೆಂದು, ವಿಶೇಷ ವೀರಶೈವನೆಂದು ನಿರಾಭಾರಿವೀರಶೈವನೆಂದು ತ್ರಿವಿಧಮಾಗಿರ್ಪನವರಲ್ಲಿ ಶ್ರೀಗುರುವಿನ ಹಸ್ತಮಸ್ತಕಸಂಯೋಗದಿಂ ವಿಭೂತಿಯ ಪಟ್ಟದಿಂ ಶಿವಮೊತ್ರೋ ಪದೇಶದಿಂ ಲಿಂಗಾಂಗಸಂಗಿಯಾಗಿ ಹಸ್ತಮಸ್ತಕ ಕಂಠ ಕಕ್ಷ ವಕ್ಷಸ್ಥಲಾದಿಗಳಲ್ಲಿ ಶಿವಲಿಂಗಧಾರಕನಾಗಿ ಏಕಕಾಲಮಾದೊಡಂ ಹಸ್ತಮಸ್ತಕ ಕಂಠ ಕಕ್ಷ ವಕ್ಷಸ್ಥಲಾದಿಗಳಲ್ಲಿ ಶಿವಲಿಂಗಧಾರಕನಾಗಿ ಏಕಕಾಲಮಾದೊಡಂ ತ್ರಿಕಾಲಮಾದೊಡಂ ಲಿಂಗಾರ್ಚನಾಸಕ್ತನಾಗಿ ಗುರುಲಿಂಗಭಸಿತಂಗಳಲ್ಲಿ ಭಕ್ತಿಯುಕ್ತನಾಗಿಪ್ಪಾತನೆ ಸಾಮಾನ್ಯವೀರಶೈವನಪ್ಪನಯ್ಯ ಶಾಂತವೀರೇಶ್ವರಾ.