Index   ವಚನ - 1    Search  
 
ಏಕಮಯ ವಸ್ತು ತನ್ಮಯ ರೂಪಾದಲ್ಲಿ, ಪಂಚಭೂತಿಕಂಗಳು ನಾಮರೂಪಾಯಿತ್ತು. ಆ ಪರಬ್ರಹ್ಮ ಪರವಸ್ತುವಾದಲ್ಲಿ, ಪರವಶವಾಯಿತ್ತು ಪಂಚಬ್ರಹ್ಮ. ಆ ಬ್ರಹ್ಮ ಬ್ರಹ್ಮನ ಕುಕ್ಷಿಗೆ ಹೊರಗಾದಲ್ಲಿ, ವಸ್ತು ನಿರ್ಧರವಾಯಿತ್ತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ.