Index   ವಚನ - 2    Search  
 
ಕಾರುಕನ ಕೈ ಮುಟ್ಟುವುದಕ್ಕೆ ಮುನ್ನವೆ, ಗುರುವಿನ ಕರ ಮುಟ್ಟುವುದಕ್ಕೆ ಮುನ್ನವೆ, ಮನಸಿಜನ ಮನ ಮುಟ್ಟುವುದಕ್ಕೆ ಮುನ್ನವೆ, ನಾಮ ರೂಪು ಬಹುದಕ್ಕೆ ಮುನ್ನವೆ, ಅದಾವ ರೂಪು ಎಂದರಿತಡೆ, ಆ ವಸ್ತು ಪ್ರಮಾಣಕ್ಕೆ ರೂಪಹ ಪರಿಯಿನ್ನೆಂತುಂಟೊ? ಅದು ಭಾವಕ್ಕೆ ಅಗೋಚರ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.