ಮರೀಚಿಕಾಜಲದಂತೆ ತೋರುತ್ತಿಹ ವಸ್ತು
ನಾದಬಿಂದುವಿನಲ್ಲಿ ಒಡಗೂಡುವ ಪರಿಯಿನ್ನೆಂತೊ?
ನಾದ ದೀರ್ಘವಾಗಿ, ಬಿಂದು ವರ್ತುಳವಾಗಿ,
ಕಳೆ ಪರಿಪೂರ್ಣವಾಗಿ, ಅವಗವಿಸಲ್ಲದೆ ಉಭಯನಾಮವಡಗದು.
ಅಡಗಿದ ಮತ್ತೆ ಈಶಾನ್ಯಮೂರ್ತಿ ಅಮೂರ್ತಿಯಾಯಿತ್ತು,
ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
Art
Manuscript
Music
Courtesy:
Transliteration
Marīcikājaladante tōruttiha vastu
nādabinduvinalli oḍagūḍuva pariyinnento?
Nāda dīrghavāgi, bindu vartuḷavāgi,
kaḷe paripūrṇavāgi, avagavisallade ubhayanāmavaḍagadu.
Aḍagida matte īśān'yamūrti amūrtiyāyittu,
mallikārjunaliṅgavu svayambhuvāda.