ಪೃಥ್ವಿ ರೂಪಾದಲ್ಲಿ ಸದ್ಯೋಜಾತನಾದ,
ಅಪ್ಪು ರೂಪಾದಲ್ಲಿ ವಾಮದೇವನಾದ
ಅಗ್ನಿ ರೂಪಾದಲ್ಲಿ ಅಘೋರನಾದ,
ವಾಯು ರೂಪಾದಲ್ಲಿ ತತ್ಪುರುಷನಾದ,
ಗಗನ ರೂಪಾದಲ್ಲಿ ಈಶಾನ್ಯನಾದ.
ಇಂತೀ ಪಂಚಕೋಶಂಗಳಲ್ಲಿ ನಿಂದು,
ಜಗಕ್ಕೆ ಶಾಂತಿಯನಿತ್ತು,
ತಾ ಸ್ವಯಂಜ್ಯೋತಿಯಾಗಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
Art
Manuscript
Music
Courtesy:
Transliteration
Pr̥thvi rūpādalli sadyōjātanāda,
appu rūpādalli vāmadēvanāda
agni rūpādalli aghōranāda,
vāyu rūpādalli tatpuruṣanāda,
gagana rūpādalli īśān'yanāda.
Intī pan̄cakōśaṅgaḷalli nindu,
jagakke śāntiyanittu,
tā svayan̄jyōtiyāgi,
īśān'yamūrti mallikārjunaliṅgavu svayambhuvāda.