ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು.
ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು,
ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು,ನಿಜದಂಗದ ಓಗರದ ಕುಂಭವ ಕಂಡು,
ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
Art
Manuscript
Music
Courtesy:
Transliteration
Vaṭavr̥kṣada ghaṭada madhyadalli ondu maṭhavippudu.
Ā maṭhakke hindeseyinda bandu, mundaḷa bāgila tegedu,
vicchandada kōṇeya kaṇḍu, kiḍi nandade dīpava koṇḍu hokku,nijadaṅgada ōgarada kumbhava kaṇḍu,
bandhavillada ōgaravanuṇḍu, sadamalaliṅgave tānāda,
īśān'yamūrti mallikārjunaliṅgavu svayambhuvāda.