ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ?
ಅದು ಸ್ಥೂಲ ಸೂಕ್ಷ್ಮ ಕಾರಣಕ್ಕೆ ಘಟಯೋಗಸಂಬಂಧ.
ಅದು ಬ್ರಹ್ಮನ ಭಿತ್ತಿ, ವಿಷ್ಣುವಿನ ಆಗು, ರುದ್ರನ ಚೇಗೆ,
ಅದು ಗುರು ಚರ ಪರಕ್ಕೆ ಕೊಟ್ಟ ಹಸಿಗೆ.
ಸಾಕಾರದಲ್ಲಿ ಕಂಡು, ನಿರಾಕಾರದಲ್ಲಿ ಅರಿದು,
ಬೆಳಗಿನ ಬಯಲಲ್ಲಿ ನಿರವಯಾಂಗನಾಗಿ ಇರಬೇಕು,
ಈಶಾನ್ಯಮೂರ್ತಿ