Index   ವಚನ - 18    Search  
 
ಆದಿವಸ್ತು, ಅನಾದಿವಸ್ತುವೆಂದು ಭೇದವ ಮಾಡಿದಲ್ಲಿ, ತನ್ನಿರವಿನ ಭೇದವೊ? ವಸ್ತುವಿನ ಸ್ವಯರೂಪದಂಗವೊ? ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕರೆಗುಂಟೆ? ಆದಿ ಅನಾದಿ ವಸ್ತುವೆಂಬುದು ತನ್ನಯ ಚಿತ್ತದ ಗೊತ್ತಲ್ಲದೆ ಅದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಏಕಮೂರ್ತಿ ಸ್ವಯಂಭು.