Index   ವಚನ - 25    Search  
 
ಬಹುರೂಪಕ್ಕೆ ಭಾಷಾಂಗವಿಲ್ಲದಿರೆ ಮೆಚ್ಚದು ಜಗ. ಗುರುಚರರೂಪ ತಾಳ್ದಲ್ಲಿ, ಗುರುವಿಂಗೆ ಗಂಭೀರತೆ, ಚರಕ್ಕೆ ನಿಸ್ಪೃಹತ್ವ. ಇಂತೀ ಉಭಯಮೂರ್ತಿ ಅಪೇಕ್ಷೆವಿರಹಿತವಾಗಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.