Index   ವಚನ - 47    Search  
 
ಜಗಕ್ಕೆ ಹೊರಗಾಗಿ ಅರಿವ ಠಾವಿಲ್ಲ, ಜಗಕ್ಕೆ ಒಳಗಾಗಿ ಮರೆವ ಠಾವಿಲ್ಲ, ಒಳಹೊರಗೆಂಬುದು ಒಂದೇ ಭೇದವಾದ ಕಾರಣ ಕುಡಿಕೆಯ ಘೃತ ಅಗಲಿಕೆ ಬಂದಂತೆ, ಅದು ಮುಂದಣ ಬಯಕೆ. ಇದು ಇಂದಿನ ಇರವು ಎಂಬುದನರಿದಲ್ಲಿ, ಉಂಟು, ಇಲ್ಲಾ ಎಂಬ ಸಂದೇಹ ಹರಿಯಿತ್ತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.