ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ,
ಇವು ಕೂಡಿ ಮಾತನಾಡುವಲ್ಲಿ,
ಶಬರ ಮತ್ಸ್ಯವ ನೋಡಿ, ಜೋಗಿ ವನಚರವ ಕಂಡು,
ಅಂಟಿನ ಡೊಂಬ ಹಕ್ಕಿಯ ಕಂಡು,
ಇಂತೀ ಮೂವರ ಹಡಹ ಕೆಡಿಸಿತ್ತು.
ಕಾರಮಳೆ ಸೋನೆಯೆದ್ದು ಸುರಿಯಿತ್ತು. ಇಂತಿನ್ನಾರ ಕೇಳುವೆ?
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ.
Art
Manuscript
Music
Courtesy:
Transliteration
Jaladoḷagaṇa matsya, vanadoḷagaṇa markaṭa, ākāśada pakṣi,
ivu kūḍi mātanāḍuvalli,
śabara matsyava nōḍi, jōgi vanacarava kaṇḍu,
aṇṭina ḍomba hakkiya kaṇḍu,
intī mūvara haḍaha keḍisittu.
Kāramaḷe sōneyeddu suriyittu. Intinnāra kēḷuve?
Īśān'yamūrti mallikārjunaliṅgave nīne balle.