Index   ವಚನ - 48    Search  
 
ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ, ಇವು ಕೂಡಿ ಮಾತನಾಡುವಲ್ಲಿ, ಶಬರ ಮತ್ಸ್ಯವ ನೋಡಿ, ಜೋಗಿ ವನಚರವ ಕಂಡು, ಅಂಟಿನ ಡೊಂಬ ಹಕ್ಕಿಯ ಕಂಡು, ಇಂತೀ ಮೂವರ ಹಡಹ ಕೆಡಿಸಿತ್ತು. ಕಾರಮಳೆ ಸೋನೆಯೆದ್ದು ಸುರಿಯಿತ್ತು. ಇಂತಿನ್ನಾರ ಕೇಳುವೆ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ.