ಪಿಪೀಲಿಕ ಮಧುರವ ಕಾಂಬಂತೆ,
ಮರ್ಕಟ ಲಂಘನವ ಕಾಂಬಂತೆ,
ವಿಹಂಗ ಆಕಾಶವನಡರುವಂತೆ,
ತ್ರಿವಿಧದ ಭೇದದ ಜ್ಞಾನವನರಿತು,
ಕಾಯಬಿಂದು, ಜೀವಬಿಂದು, ಜ್ಞಾನಬಿಂದು,
ತ್ರಿವಿಧ ಬಿಂದುವಿನಲ್ಲಿ ನಿಂದು ಕಂಡು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ,
ಸ್ವಯಂಭುವನರಿಯಬೇಕು.
Art
Manuscript
Music
Courtesy:
Transliteration
Pipīlika madhurava kāmbante,
markaṭa laṅghanava kāmbante,
vihaṅga ākāśavanaḍaruvante,
trividhada bhēdada jñānavanaritu,
kāyabindu, jīvabindu, jñānabindu,
trividha binduvinalli nindu kaṇḍu,
īśān'yamūrti mallikārjunaliṅgadalli,
svayambhuvanariyabēku.