ಕಾಯದಲ್ಲಿ ಪರಿಪೂರ್ಣನಾಗಿ ಜೀವನಿಪ್ಪ ಭೇದವ,
ಜೀವದಲ್ಲಿ ಜ್ಞಾನಪರಿಪೂರ್ಣವಾಗಿಪ್ಪ ಭೇದವ,
ಜ್ಞಾನದಲ್ಲಿ ಬೆಳಗು ಬಿಂಬಿಸುತಿಪ್ಪ ಭೇದವ [ಅರಿಯಬೇಕು].
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಜ್ಯೋತಿರ್ಮಯವಾಗಿಪ್ಪುದು.
Art
Manuscript
Music
Courtesy:
Transliteration
Kāyadalli paripūrṇanāgi jīvanippa bhēdava,
jīvadalli jñānaparipūrṇavāgippa bhēdava,
jñānadalli beḷagu bimbisutippa bhēdava [ariyabēku].
Īśān'yamūrti mallikārjunaliṅgavu,
jyōtirmayavāgippudu.