Index   ವಚನ - 60    Search  
 
ಅಂಗವನಳಿವನ್ನಕ್ಕ ಶಿವಲಿಂಗ ಪೂಜೆಯ ಮಾಡಬೇಕು. ಆತ್ಮನ ಕ್ಷುಧೆಯುಳ್ಳನ್ನಕ್ಕ ಬಂದ ಪದಾರ್ಥವ ಲಿಂಗಾರ್ಪಿತ ಮಾಡಬೇಕು. ಇದು ಅರಿವಿನ ಭಿತ್ತಿ , ಜ್ಞಾನದ ಗೊತ್ತು, ಸರ್ವಮಯದ ಯುಕ್ತಿ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವ ಶಕ್ತಿ.