Index   ವಚನ - 85    Search  
 
ಅರ್ತಿಯಿಂದ ಮಾಡುವ ಭಕ್ತಿ, ಕರ್ತಾರನ ಕಮ್ಮಟಕ್ಕೊಳಗಾಯಿತ್ತು. ಸತ್ಯದಿಂದ ಮಾಡುವ ಭಕ್ತಿ, ಕರ್ತಾರನ ಕಮ್ಮಟಕ್ಕೆ ಹೊರಗಾಯಿತ್ತು. ಅರ್ತಿ ಲೌಕಿಕಕ್ಕೆ, ಸತ್ಯ ಪರಮಾರ್ಥಕ್ಕೆ. ಉಭಯದ ಗೊತ್ತನರಿದು ಮಾಡುವನ ಭಕ್ತಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕರ್ಪಿತವಾಯಿತ್ತು.