Index   ವಚನ - 84    Search  
 
ಪರಸ್ತ್ರೀಯರ ಬಿಟ್ಟಾಗಲೆ ಗುರುವಿನ ಇರವು ಸಾಧ್ಯವಾಯಿತ್ತು. ಪರಧನವ ಬಿಟ್ಟಾಗಲೆ ಲಿಂಗದ ಇರವು ಅಂಗದಲ್ಲಿ ಸಲೆ ಸಂದಿತ್ತು. ನಿಂದೆಯೆಂಬುದು ನಿಂದಾಗಲೆ, ಜಂಗಮಭಕ್ತಿ ಸಾಧ್ಯವಾಯಿತ್ತು. ಇಂತೀ ತ್ರಿವಿಧದಲ್ಲಿ ತಟ್ಟದಿಪ್ಪಾತನು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಮುಟ್ಟಿಪ್ಪನು.