Index   ವಚನ - 99    Search  
 
ಅರ್ತಿ ಅಭ್ಯಾಸ ಮಚ್ಚು ಕಾರಣದಿಂದ ಮಾಡುವ ಭಕ್ತಿ, ದ್ರವ್ಯದ ಕೇಡಾಯಿತ್ತು. ಮನ ನೆಮ್ಮಿದ ಅರ್ತಿ, ಘನವ ನೆಮ್ಮಿದ ಅಭ್ಯಾಸ, ಎಡೆಬಿಡುವಿಲ್ಲದ ಮಚ್ಚು, ಘನಲಿಂಗವ ಕೂಡುವುದೊಂದಚ್ಚು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಸುಚಿತ್ತದ ಗೊತ್ತು.