Index   ವಚನ - 101    Search  
 
ರೂಪು ರುಚಿ ಚಿತ್ತ, ಈ ಮೂರು ಏಕವಾಗಿ ನಿಂದಲ್ಲಿ, ಲಿಂಗಾರ್ಪಿತ. ರೂಪ ಭಾವಿಸದೆ, ರುಚಿಯ ಭಿನ್ನವನರಿಯದೆ, ಚಿತ್ತದ ಗೊತ್ತ ಮುಟ್ಟದೆ, ಅದೆತ್ತಣ ಅರ್ಪಿತ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ?