Index   ವಚನ - 109    Search  
 
ಭಕ್ತ ನಾನೆ ಎಂದು ತನ್ನ ತಾನೆ ನಿಶ್ಚೈಸುವನ್ನಬರ, ವಿರಕ್ತ ನಾನೆ ಎಂದು ತನ್ನ ತಾನೆ ಬೀಗುವನ್ನಬರ, ಅಂಧಕ ಸಮೂಹದಲ್ಲಿದ್ದು, ನಗೆಯ ಕೇಳಿ ತಾ ಕಾಣದೆ ನಗುವಂತೆ, ಉಭಯದಿರವ ಮೆಚ್ಚ ಶಿವಲೆಂಕನೊಡೆಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.