ಸಾರಿದುದ ಕಂಡು, ಕೇಳಿ ಮೀರಿ ನಡೆದಡೆ,
ಅವನ ಗಾರುಮಾಡಿದಡೆ, ಕೇಡುಂಟೆ ಅಯ್ಯಾ?
ದೃಷ್ಟದಿಂದ, ಶರಣರ ಸಂಗದಿಂದ, ಶ್ರುತಿಸ್ಮೃತಿತತ್ವಂಗಳಿಂದ,
ಪಾಪಪುಣ್ಯಗಳೆಂಬುದನರಿದು ಮರೆಯಬಹುದೆ?
ಗುರುವಿಗೂ ಆಚರಣೆ, ಲಿಂಗಕ್ಕೂ ಆಚರಣೆ, ಜಂಗಮಕ್ಕೂ ಆಚರಣೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೂ ಆಚರಣೆ,
Art
Manuscript
Music
Courtesy:
Transliteration
Sāriduda kaṇḍu, kēḷi mīri naḍedaḍe,
avana gārumāḍidaḍe, kēḍuṇṭe ayyā?
Dr̥ṣṭadinda, śaraṇara saṅgadinda, śrutismr̥titatvaṅgaḷinda,
pāpapuṇyagaḷembudanaridu mareyabahude?
Guruvigū ācaraṇe, liṅgakkū ācaraṇe, jaṅgamakkū ācaraṇe,
īśān'yamūrti mallikārjunaliṅgakkū ācaraṇe,