Index   ವಚನ - 9    Search  
 
ನೆನಹಿಗೆ ಬಾರದ ವಸ್ತುವ ನೆನವ ಪರಿ ಇನ್ನೆಂತೋ? ಭಾವಕ್ಕೆ ಬಾರದ ವಸ್ತುವ ಭಾವಿಸುವ ಪರಿ ಇನ್ನೆಂತೋ? ನೆನೆಯದೆ ಭಾವಿಸದೆ ಎನ್ನೊಳಗೆ ಬಯಲುರೂಪವಾಗಿ ತೋರಿದನು ನೋಡಾ ಅಖಂಡೇಶ್ವರಾ.