Index   ವಚನ - 25    Search  
 
ಭವಕ್ಕೆ ಬೀಜವಾದುದು ತನುವೊ? ಮನವೊ? ಎಂದು ವಿವರಿಸಿ ನೋಡಲು ಮನವೆ ಕಾರಣವಾಗಿಪ್ಪುದರಿಂದೆ, ಈ ಕೆಟ್ಟಮನದ ಸಂಗದಿಂದೆ ಮರ್ತ್ಯಲೋಕದಲ್ಲಿ ಹುಟ್ಟಿ ತಾಪತ್ರಯಾಗ್ನಿಯಿಂದೆ ಕಂದಿ ಕುಂದಿ ನೊಂದು ಬೆಂದೆನಯ್ಯ. ಈ ಮನದ ಸಂಗದಿಂದೆ ಭವಭವಂಗಳಲ್ಲಿ ತೊಳಲಿ ಬಳಲಿದೆನಯ್ಯ. ಈ ಮನದ ಸಂಗದಿಂದೆ ಅನಂತ ಮರವೆಯ ಚೋಹಂಗಳಲ್ಲಿ ಸೆರೆಸಿಕ್ಕಿದೆನಯ್ಯ. ಈ ಮನದ ಸಂಗವ ಬಿಡಿಸಿ ನಿಮ್ಮ ನೆನಹಿನ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.