Index   ವಚನ - 24    Search  
 
ಸುಡುಸುಡು ಈ ದೇಹದ ರೂಪು; ನೋಡಿದಡೇನೂ ಹುರುಳಿಲ್ಲವಯ್ಯ. ಎಲವು ಚರ್ಮ ನರ ಮಾಂಸ ಮಲಮೂತ್ರಯುಕ್ತವಾದ ಅನಿತ್ಯದೇಹವ ನಚ್ಚಿ ನಿಮ್ಮ ನಿಜವ ಮರೆದು ಭವಧಾರಿಯಾದೆನಯ್ಯ ಅಖಂಡೇಶ್ವರಾ.