ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ,
ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ.
ಮನದ ವಿಕಾರದ ಮರವೆಯಲ್ಲಿ ಸಿಲ್ಕಿ,
ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ.
ಈ ತನುಮನದ ವಿಕಾರವ ಮಾಣಿಸಿ,
ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ
ಸಲಹಯ್ಯ ಎನ್ನ ಅಖಂಡೇಶ್ವರಾ.
Art
Manuscript
Music
Courtesy:
Transliteration
Tanuvina vikārada kattaleyalli silki,
kaṅgeṭṭu kaḷavaḷisi toḷali baḷalidenayya.
Manada vikārada maraveyalli silki,
maṇṇumasiyāgi baṇṇageṭṭenayya.
Ī tanumanada vikārava māṇisi,
nim'ma bhaktiya vikāradallirisi
salahayya enna akhaṇḍēśvarā.